ಮಂಗಳವಾರ, ಜನವರಿ 11, 2011

ನಾವು ಯಾಕೆ ಹಿಂಗೆ? - ಪ್ರಶ್ನೆಗಳು

ಏನು ಹೆಡ್ಡಿಂಗ್ ನೋಡಿ ತುಂಬಾ ಸೀರೀಯಸ್ ಟಾಪಿಕ್ ಅಂದುಕೊಂಡ್ರಾ? ನನಗಂತೂ ಸೀರೀಯಸ್ ಎನಫ್ ಅನ್ನಿಸ್ತು, ಇಫ್ ನಾಟ್ ನೌ, ನೆವರ್ ಅನ್ನಿಸ್ತು.
ನಮ್ಮಲ್ಲಿ ಏನೋ ಒಂಥರ ಉಡಾಫೆ ಇದೆ. ಅದು ಎಲ್ಲಿಂದ ಬಂದಿದ್ದು ಅಂತ ರಿಸರ್ಚ್ ಮಾಡಿದ್ರೂ ಆನ್ಸರ್ ಸಿಗ್ತಾ ಇಲ್ಲ. ನಿಮ್ಗೊಸೀ ಗೊತ್ತಿದ್ರೆ ಹೇಳಿಬುಡಿ.

೧. ಜನ ಯಾಕೆ ತಮ್ಮ ಹೆಸರಿನ ಮುಂದೆ ಒಂದಷ್ಟು ಆಂಗ್ಲ ಅಕ್ಷರಗಳನ್ನ ಇಷ್ಟ ಬಂದಿದ್ದ್ ಆರ್ಡರ್ ನಲ್ಲಿ ಬರ್ಕೊಂಡು,ತಮ್ಮನ್ನು ತಾವೇ ವಿದ್ಯಾವಂತರು ಅಂದುಕೊಂಡು ಇರ್ತಾರೆ? ಅವ್ರಿಗೆ ಯಾಕೆ ತಿಳ್ಯೋಲ್ಲ, ವಿದ್ಯಾವಂತರು, ಬುದ್ದಿವಂತರು ಹಾಗೂ ಅಕ್ಷರಸ್ಥರಲ್ಲಿ ಬಹಳಾ ಡಿಫರೆನ್ಸ್ ಇದೆ ಅಂತ?
೨. ರೋಡ್ ನಲ್ಲಿ ಗಾಡಿ ಓಡಿಸುವಾಗ ಎಲ್ಲ ರೂಲ್ಸ್ ಗಾಳಿಗೆ ಯಾಕೆ ತೂರಿಬಿಡ್ತಾರೆ? - ಸುಮ್ನೇ ಹಾರ್ನ್ ಮಾಡೋದು, ಲೆಫ್ಟ್ ಒವರ್ಟೇಕ್ ಮಾಡೋದು, ಸಿಗ್ನಲ್ ಜಂಪ್ ಮಾಡೋದು ( ಅಸ್ ಇಫ್ ಯಾರೋ ಇವರಿಗೋಸ್ಕರ ಕಾಯ್ತಾ ಇರೋ ಹಾಗೆ...ದೇವ್ರು ಇರ್ಬೇಕು :)), ರಾಂಗ್ ಲೇನ್ - ರಾಂಗ್ ಸೈಡ್ ಡ್ರೈವಿಂಗ್ ಎಟ್ಸೆಟರ ಎಟ್ಸೆಟರ
೩. ಎಲ್ಲಿ ಬಹಳಷ್ಟು ಜನ ಇರ್ತಾರೋ, ಯಾಕೆ ಕ್ಯೂ ಸಿಸ್ಟಮ್ ಫಾಲೊ ಮಾಡೋಲ್ಲ? ಉದಾಹರಣೆಗೆ: ನಮ್ಮ ಕಫೆಟೇರಿಯಾದಲ್ಲಿ ತುಂಬಾ ಜನ ಲೈನ್ ಬ್ರೇಕ್ ಮಾಡ್ತಾನೆ ಇರ್ತಾರೆ...ಇಷ್ಟಾಗಿ ಇವರೆಲ್ಲಾ ಫರ್ಸ್ಟ್ ಪಾಯಂಟ್ನಲಿ ಸೇರೊಂತ ಜನ.
೪. ಮೊಬೈಲ್ ಹಿಡಿದು(ಆಫ್ ಕೋರ್ಸ್ ಮಾತನಾಡುತ್ತಾ) ರೋಡ್, ಸಿಗ್ನಲ್ ಯಾಕೆ ಕ್ರಾಸ್ ಮಾಡೋದು, ಗಾಡಿ ಓಡಿಸೋದು?
೫. ಯಾಕೆ ಎಲ್ಲಾ ವಿಷಯದಲ್ಲೂ ತಾವೇ ಕರೆಕ್ಟ್ ಅನ್ನುವ ಮನೋಭಾವ?
೬. ಯಾಕೆ ಫೀಡ್‌ಬ್ಯಾಕ್ ಕೇಳಿ ಕೂಡ ತಮ್ಮ ತಲೆಯಲ್ಲಿರುವ ಉತ್ತರ ಆ ಫೀಡ್‌ಬ್ಯಾಕ್ ಆಗಿರಬೇಕು ಎನ್ನುವ ಇಚ್ಚೆ?
೭. ತಾವು ಡಿಸರ್ವ್ ಮಾಡಿರೋದಾಕ್ಕಿಂತಾ ಹೆಚ್ಚು ಪಡೆಯುವ ಆಸೆ ಏಕೆ?

ಅಕಟಕಟಾ ಈ ಎಲ್ಲಾ ಪ್ರಶ್ನೆಗೆ ನೀವು ಉತ್ತರಿಸಿದರೆ ನಿಜವಾಗ್ಯೂ ನಿಮ್ಮ ತಲೆ ಸಾವಿರ ಚೂರಾಗಿ ಬೀಳುವುದು ಇಲ್ಲದಿದ್ರೆ ಮುಂದೆಂದೋ ನಾನು ಬರೆವ ಉತ್ತರ ನೋಡಿ ಹೂನ್ ಎಂದು ತಲೆ ಆಡಿಸಿ. ಏನಂತೀರಾ?

1 ಕಾಮೆಂಟ್‌ಗಳು:

Blogger ವಾಣಿಶ್ರೀ ಭಟ್ ಹೇಳಿದರು...

RAGHU mostly idu Life realted,Human nature related so called educated people ivara NP complex problem defination irabeku..:)
Nice lines :)

ಜನವರಿ 12, 2011 ರಂದು 11:33 ಅಪರಾಹ್ನ ಸಮಯಕ್ಕೆ  

ಕಾಮೆಂಟ್‌‌ ಪೋಸ್ಟ್‌ ಮಾಡಿ

ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ [Atom]

<< ಮುಖಪುಟ