ಮಂಗಳವಾರ, ಜನವರಿ 4, 2011

ಆಟೋ(ರೀಕ್ಕ್ಷಾ)ಪನಿಷತ್ತು

ಬಹಳ ಹಿಂದೆ ಯಾರೋ ಸಾಮಾನ್ಯ ಮನುಷ್ಯ ಒಂದು ಅಸಾಮಾನ್ಯ ನುಡಿಯೊಂದು ಹೇಳಿದ್ದು ಕೇಳಿದ್ದೆ.
" ಕಪಿಪ್ರವೃತ್ತಿಯ ಮನುಷ್ಯನಲ್ಲೂ ಕವಿ ಹೃದಯ ಇರುತ್ತೆ".
ನಾ ಕಂಡ ಕಪಿ ಪ್ರವೃತ್ತಿ ಮನುಷ್ಯರಲ್ಲಿ ಮೊದಲಿಗರು ವಾಹನ ಚಾಲಕರು. ಅದರಲ್ಲೂ ಆಟೋ ಚಾಲಕರು. ಆ ಸೀಟಿನ ಮೇಲೆ ಕುಳಿತರೆ ಅವರಿಗೆ ಬಾಲ ಮೂಡುವುದು ಖಂಡಿತ. ಯಾರಾಗಾದ್ರೂ ಅನುಮಾನ ಇದ್ದಾರೆ ಬೆಟ್ ಕಟ್ಟಿ ಸೋಲೋ ಹುನ್ನಾರ ನೀವೇ ಮಾಡ್‌ಕೋಳಿ.
ಇಷ್ಟೊಂದು ಪೀಟಿಕೆ ಯಾಕಪ್ಪಾ ಅಂದ್ರೆ...ನಾ ಓದಿದ ಕೆಲವು ಆಟೋ ಹಿಂದಿನ ಬರಹಗಳು.

"ಪ್ರೀತಿಸಿದರೆ ಲವ್ ಸ್ಟೋರೀ ಇಲ್ಲಾಂದ್ರೆ ಕ್ರೈಮ್ ಸ್ಟೋರೀ"

"ಪ್ರೀತಿ ಕೊಂದ ಕೊಲೆಗಾತಿ"

"ನಾ ಬರಲಿ ಬಾರದಿರಲಿ,ನೀ ಮುಡಿದ ಹೂವು ಬಾಡದಿರಲಿ"

"ಚಿಕ್ಕಪ್ಪ ಚಿಕ್ಕಪ್ಪನೆ ಹೊರತು ದೊಡ್ಡಪ್ಪನಾಗಲಾರ" - ಅಣ್ಣಾವ್ರು ನೋಡಿದ್ರೆ ಬಬ್ರುವಾಹನದಲ್ಲಿ ಈ ಡೈಲಾಗ್ ತೆಗಸಿಹಾಕಿಬಿಡ್ತಿದ್ದೆನೋ? ಇನ್ನೊಂದು ನನ್ನ ಡೌಟ್ ಏನಂದ್ರೆ ಔಟೋಗಳು ತುಂಬಾ ಸೌಂಡ್ ಮಾಡೋದ್ರಿಂದ ಅದನ್ನು ಬಬ್ರು ವಾಹನ ಅಂತ ಕರಿಬಹುದಾ? ಹೌದದ್ರೆ ಈ ಡೈಲಾಗ್ ಓಕೇ.

"ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೀಬೇಡ" - ಈಗಿನ ಗ್ಲೋಬಲೈಸೇಶನ್ ಜಮಾನದಲ್ಲಿ ಇಬ್ಬರು ಒಬ್ರೆ ಅಲ್ವಾ?(ಪನ್ ಇನ್‌ಟೆಂಡೆಡ್ ಓನ್ಲೀ )

ಇನ್ನೊಂದು ಡೌಟ್ ಏನಂದ್ರೆ - ಇದು ಆಟೋ ಡ್ರೈವರ್ ಕ್ರಿಯೇಟಿವಿಟೀಯಾ ಅಥವಾ ಪೇಂಟರ್ದ?

ಕೆಲವು ಆಬ್ವಿಯಸ್ ಅರ್ಥಗಳು -
"ತಂದೆ ತಾಯಿ ಆಶೀರ್ವಾದ" ಅಂದ್ರೆ ಆಟೋ ಈಸ್ ಫಂಡೆಡ್ ಬೈ ಅಪ್ಪ ಅಮ್ಮ
"ಅಣ್ಣ ಅತ್ತಿಗೆ ಆಶೀರ್ವಾದ" ಅಂದ್ರೆ ಮನೇಲೆ ತುಂಬಾ ಕಾಟ ಕೊಡ್ತಾ ಇದ್ದ ಅದಕ್ಕೆ ಪಾಲು ಕೊಟ್ಟು ಆಚೆ ಹಾಕಿದ್ದೀವಿ
"ಹಾಯ್ ಗೀತ" "ಹಾಯ್ ಚಿಂಟು" ಎಟ್ಸೆಟರ ಎಟ್ಸೆಟರ - ಮನದಾಳದ ಮಾತು ಇನ್ನೂ ಅಲ್ಲೇ ಇದೆಅನ್ನುವ ಅರ್ಥ


ವಿ.ಸೂ : ಇವೆಲ್ಲ ಓದಿ ಯಾರದಾದ್ರೂ ಮನ ನೊಂದಿದ್ರೆ ನಾನೇ ಜವಾಬ್ದಾರ ಓಕೇ

1 ಕಾಮೆಂಟ್‌ಗಳು:

Blogger ವಾಣಿಶ್ರೀ ಭಟ್ ಹೇಳಿದರು...

:) :) Nice one!!!!!

ಜನವರಿ 9, 2011 ರಂದು 07:42 ಅಪರಾಹ್ನ ಸಮಯಕ್ಕೆ  

ಕಾಮೆಂಟ್‌‌ ಪೋಸ್ಟ್‌ ಮಾಡಿ

ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ [Atom]

<< ಮುಖಪುಟ